ನಮ್ಮೂರ ಬಾನುಲಿ ಕರ್ನಾಟಕದ ಬೆಳಗಾವಿಯಿಂದ ಪ್ರಸಾರವಾಗುವ 90.8 ಎಫ್ಎಂ ಸಮುದಾಯ ರೇಡಿಯೋ. ಮಹಿಳಾ ಕಲ್ಯಾಣ ಸಂಘದಿಂದ 2016ರ ಮೇ 16ರಂದು ಆರಂಭವಾದ ಈ ಕೇಂದ್ರವು ಆರೋಗ್ಯ, ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಕೃಷಿ ಕುರಿತು ಜಾಗೃತಿ ಮೂಡಿಸುತ್ತದೆ. 'ಅಕ್ಕ ಕೇಳಕ್ಕ', 'ಚಿಣ್ಣರ ಲೋಕ' ಮತ್ತು ಕೃಷಿ ಅಭಿವೃದ್ಧಿಯ 'ಬಿತ್ತೊ ಬೇಳೆಯೋಣ' ಇದರ ಜನಪ್ರಿಯ ಕಾರ್ಯಕ್ರಮಗಳು; ಗ್ರಾಮೀಣ ಸರೋತೃಗಳ ಜೀವನಕ್ಕೆ ನೇರವಾಗಿ ಉಪಯೋಗವಾಗುವ ಮಾಹಿತಿಯೇ ಇದರ ಬಲ.